ಸಂಶೋಧನೆ ಮತ್ತು ದಾಖಲೀಕರಣಗಳು ಮಾನ್ಯತೆ ಪ್ರಕ್ರಿಯೆಯ ಪ್ರಮುಖ ಅಂಶಗಳಾಗಿರುವುದರಿಂದ, ನ್ಯಾಕ್ ಅತಿ ಹೆಚ್ಚು ಪುಸ್ತಕಗಳಿಂದ ಕೂಡಿದ ಗ್ರಂಥಾಲಯ ಮತ್ತು ಸಕ್ರಿಯ ಪ್ರಕಟಣಾ ಘಟಕವನ್ನು ನಿರ್ಮಿಸಿದೆ. ನ್ಯಾಕ್ ನ ಪ್ರಕಟಣೆಗಳನ್ನು ಮಾನ್ಯತೆ ಪ್ರಾಮುಖ್ಯತೆಯ ಕುರಿತು ಬೋಧಕವರ್ಗದಲ್ಲಿ ಜಾಗೃತಿ ಮೂಡಿಸಲು ವಿನ್ಯಾಸಗೊಳಿಸಲಾಗಿದೆ. ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳಿಗಾಗಿ ಕೈಪಿಡಿಗಳು ಮುದ್ರಣ ಮತ್ತು ವಿದ್ಯುನ್ಮಾನ ರೂಪದಲ್ಲಿ ಲಭ್ಯವಿದೆ. ನ್ಯಾಕ್ ಮೌಲ್ಯಯುತವಾದ ನೀತಿ ಮಾಹಿತಿಗಳನ್ನು ಒದಗಿಸುವ ಹಲವಾರು ಸಂಶೋಧನಾ ಅಧ್ಯಯನಗಳು, ಪರಿಣಾಮಕಾರಿ ವಿಶ್ಲೇಷಣೆ ಮತ್ತು ಪ್ರತಿಕ್ರಿಯೆಗಳ ಸಮೀಕ್ಷೆಗಳನ್ನು ನಡೆಸುತ್ತದೆ.

Library

ನ್ಯಾಕ್ ಉನ್ನತ ಶಿಕ್ಷಣದ ಎಲ್ಲಾ ಕಾರ್ಯಕ್ಷೇತ್ರಗಳನ್ನೊಳಗೊಂಡ ಅತ್ಯುತ್ತಮ ಸಂಗ್ರಹದ ಗ್ರಂಥಾಲಯವನ್ನು ಹೊಂದಿದೆ ಮತ್ತು ಉನ್ನತ ವಿದ್ಯಾಭ್ಯಾಸ ಮತ್ತು ಮಾನ್ಯತೆಯ ಗುಣಮಟ್ಟಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತದೆ. ಅಂತರ್ಜಾಲದ ಮೂಲಕ ಗಣಕೀಕೃತ ಪ್ರಸರಣ ಮತ್ತು ಒಪಿಎಸಿ(ಒಪ್ಯಾಕ್- ಆನ್‌ಲೈನ್ ಪಬ್ಲಿಕ್ ಆಕ್ಸೆಸ್ ಕ್ಯಾಟಲಾಗ್) ಗಾಗಿ ಬಾರ್ಕೋಡ್ನೊಂದಿಗೆ ಗ್ರಂಥಾಲಯ ಸಂಪೂರ್ಣವಾಗಿ ಯಾಂತ್ರಿಕೃತವಾಗಿರುತ್ತದೆ.

ಈ ಸಂಗ್ರಹಣೆಯಲ್ಲಿ ಮೌಲ್ಯೀಕರಣ ಮತ್ತು ಮಾನ್ಯತೆ, ಬೋಧನೆ-ಕಲಿಕೆ ಪ್ರಕ್ರಿಯೆ, ಬೋಧನಾ ತಂತ್ರಗಳು, ಪಠ್ಯಕ್ರಮ ಅಭಿವೃದ್ಧಿ, ಉನ್ನತ ಶಿಕ್ಷಣದಲ್ಲಿ ಐಸಿಟಿ, ವಿಶ್ವವಿದ್ಯಾಲಯ ಶಿಕ್ಷಣ, ಶೈಕ್ಷಣಿಕ ಯೋಜನೆ ಮತ್ತು ಆಡಳಿತ, ಬೋಧಕವರ್ಗ ಅಭಿವೃದ್ಧಿ, ವಿದ್ಯಾರ್ಥಿ ಬೆಂಬಲ ಮತ್ತು ಪ್ರಗತಿ, ಮಹಿಳಾ ಅಧ್ಯಯನ, ಸಂಪೂರ್ಣ ಗುಣಮಟ್ಟ ನಿರ್ವಹಣೆ, ನಿರ್ವಹಣೆ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ವಿದ್ಯಾರ್ಥಿ ಅಭಿವೃದ್ಧಿ ಮತ್ತು ಸಾಮಾನ್ಯ ಉಲ್ಲೇಖದ ವಸ್ತುಗಳು. ಯು.ಜಿ.ಸಿ, ಎಐಯು, ವಿಶ್ವ ಬ್ಯಾಂಕ್, ಯುನೆಸ್ಕೋ, ಕಾಮನ್ ವೆಲ್ತ್ ಆಫ್ ಲರ್ನಿಂಗ್ ಮತ್ತು ಇತರ ಅಂತರಾಷ್ಟ್ರೀಯ ಮಾನ್ಯತಾ ಸಂಸ್ಥೆಗಳ ಪ್ರಕಟಣೆಯ ವಿಶೇಷ ಸಂಗ್ರಹವನ್ನು ಗ್ರಂಥಾಲಯವು ಇರಿಸಿಕೊಳ್ಳುತ್ತದೆ. ಗ್ರಂಥಾಲಯ ಸಂಗ್ರಹಗಳನ್ನು ಡೆವಿ ದಶಮಾಂಶ ವರ್ಗೀಕರಣ ವ್ಯವಸ್ಥೆ ಪ್ರಕಾರ ವರ್ಗೀಕರಿಸಲಾಗಿದೆ.

ನ್ಯಾಕ್ ಸಿಬ್ಬಂದಿ ಮತ್ತು ಶೈಕ್ಷಣಿಕ ಬಳಕೆದಾರರಿಗೆ ಮತ್ತು ಇತರ ಸಂಸ್ಥೆಗಳಿಂದ ಎಲ್ಲಾ ನ್ಯಾಕ್ ಪ್ರಕಟಣೆಗಳಿಗೆ ಗ್ರಂಥಾಲಯದ ಪ್ರವೇಶಕ್ಕೆ ಅವಕಾಶ ಇರುತ್ತದೆ . ಗ್ರಂಥಾಲಯ ಸುಮಾರು ನೂರಕ್ಕೂ ಹೆಚ್ಚಿನ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನಿಯತಕಾಲಿಕಗಳು ಮತ್ತು ಎಮರಾಲ್ಡ್ ಮತ್ತು ಇಆರ್ಐಸಿ ಅಂತರಾಷ್ಟ್ರೀಯ ದತ್ತಾಂಶ ಮಾದರಿಗಳ ಜಾಲತಾಣ ಮತ್ತು ಮುದ್ರಣ ಆವೃತ್ತಿಗಳಿಗೆ ಚಂದಾದಾರರಾಗಿದೆ.

ಈ ಗ್ರಂಥಾಲಯದಲ್ಲಿ ಸ್ವಯಂ ಅಧ್ಯಯನ ವರದಿಗಳು (ಎಸ್ಎಸ್ಆರ್), ಮರು-ಮಾನ್ಯತಾ ವರದಿಗಳು(ಆರ್ಎಆರ್), ಆಂತರಿಕ ಗುಣಮಟ್ಟ ಖಾತರಿ ಕೋಶ ವರದಿಗಳು(ಐಕ್ಯೂಎಸಿ) ಮತ್ತು ಪರಿಶೀಲನಾ ತಂಡಗಳ ನ್ಯಾಕ್ ಮಾನ್ಯತೆ ಪಡೆದ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳ ದಾಖಲೆಗಳು, ಸುಲಭವಾಗಿ ಮರುಪಡೆಯಲು ಕಂಪ್ಯೂಟರೀಕೃತಗೊಳಿಸಲಾಗಿದೆ. ಸಂಗ್ರಹಣೆಯು ಮಾನ್ಯತೆ ಮತ್ತು ಶಿಕ್ಷಣ ಸಂಶೋಧನೆಯ ಪ್ರಕ್ರಿಯೆಯಲ್ಲಿರುವವರಿಗೆ ಮೌಲ್ಯಯುತವಾದ ಉಲ್ಲೇಖ ವಸ್ತುವಾಗಿ ಪ್ರಶಂಸಿಸಲ್ಪಟ್ಟಿದೆ. ಆಂತರಿಕ ಮತ್ತು ಬಾಹ್ಯ ಬಳಕೆದಾರರಿಗೆ ಬೇಡಿಕೆಯ ಮೇಲೆ ಪ್ರವೇಶವನ್ನು ನೀಡಲಾಗಿದೆ .

ಗ್ರಂಥಾಲಯವು ಎಲ್ಲಾ ಕೆಲಸದ ದಿನಗಳಲ್ಲಿ ಬೆಳಗ್ಗೆ ೯.೧೫ ರಿಂದ ಸಂಜೆ ೫.೪೫ ರವರೆಗೆ ತೆರೆದಿರುತ್ತದೆ.

ಗ್ರಂಥಾಲಯ ಸಂಗ್ರಹಗಳು

ನ್ಯಾಕ್ ನ ಗ್ರಂಥಾಲಯವು ಉನ್ನತ ಶಿಕ್ಷಣ, ನ್ಯಾಕ್ ಮತ್ತು ಯುಜಿಸಿ-ಸಹಯೋಗದೊಂದಿಗೆ ನಡೆಸಲಾದ ಸಮ್ಮೇಳನಗಳ ನಡಾವಳಿಗಳು ಮತ್ತು ಎಸ್ಎಸ್ಆರ್ / ಎಸ್ ಎ ಆರ್, ಆರ್ ಎ ಆರ್, ಮತ್ತು ಎಕ್ಯೂಎಸಿ ವರದಿಗಳ ಪುಸ್ತಕಗಳ ಒಂದು ದೊಡ್ಡ ಸಂಗ್ರಹವನ್ನು ಹೊಂದಿದೆ. ಇವುಗಳು ಶೈಕ್ಷಣಿಕ ಸಿಬ್ಬಂದಿ, ಸಂಶೋಧನಾ ವಿದ್ವಾಂಸರು ಮತ್ತು ನ್ಯಾಕ್ ಮಾನ್ಯತೆಗಾಗಿ ಉದ್ದೇಶ ಹೊಂದಿರುವವರು - ಇವರುಗಳಿಗೆ ಅತ್ಯಂತ ಉಪಯುಕ್ತವಾಗುತ್ತಿದೆ.

೨೧-೦೨-೨೦೧೮ ರಂತೆ ಒಟ್ಟು ಸಂಗ್ರಹ
ಪುಸ್ತಕಗಳು ೩೮೭೨
ನಿಯತಕಾಲಿಕಗಳನ್ನು ಹೊರಡಿಸಿದ ಸಂಪುಟಗಳು ೫೭೮
ಸಿಡಿ-ರಾಮ್ಸ್ (ಅಮೂರ್ತ ಮತ್ತು ಸೂಚ್ಯಂಕ ಸೇವೆಗಳು) ೪೭
ಐದು ವರ್ಷಗಳ ಎಕ್ಯೂಎಸಿ ವರದಿಗಳೊಂದಿಗೆ ೭೫೦೦
ಸ್ವಯಂ ಅಧ್ಯಯನ ವರದಿಗಳು / ಸ್ವಯಂ ಮೌಲ್ಯಮಾಪನ ವರದಿಗಳುಮರು ಮಾನ್ಯತಾ ವರದಿ ೪೧00
ನ್ಯಾಕ್ ನ ಸಹಯೋಗದ ಕಾರ್ಯಾಗಾರ ಮತ್ತು ಸಮ್ಮೇಳನ ವಿಚಾರಣೆಗಳು ೨೦೦
ಅಂತರರಾಷ್ಟ್ರೀಯ ನಿಯತಕಾಲಿಕಗಳು (ಉನ್ನತ ಶಿಕ್ಷಣ) ೧೦
ರಾಷ್ಟ್ರೀಯ ನಿಯತಕಾಲಿಕೆಗಳು ಮತ್ತು ನಿಯತಕಾಲಿಕೆಗಳು ೧೫
ಸುದ್ದಿಪತ್ರಗಳು ೧೨

ಗ್ರಂಥಾಲಯ ವಿಭಾಗಗಳು

 • ಅವಲೋಕನ ಗ್ರಂಥಗಳ ವಿಭಾಗ
 • ಎಸ್ಎಸ್ಆರ್ / ಎಸ್ಎಆರ್ ಮತ್ತು ಆರ್ ಎ ಆರ್ ವಿಭಾಗ
 • ಹೊರಡಿಸಿದ ಸಂಪುಟ ವಿಭಾಗ
 • ತಾಂತ್ರಿಕ ಮತ್ತು ಸಂಚಿಕೆ ವಿಭಾಗ
 • ಸಂಶೋಧನೆ ಕೋಣೆ ವಿಭಾಗ
 • ಪ್ರಕಟಣೆ ಪ್ರದರ್ಶನ ವಿಭಾಗ
 

ಗ್ರಂಥಾಲಯ ಮತ್ತು ಮಾಹಿತಿ ಸೇವೆ

 • ದಾಖಲೆಗಳ ಪ್ರಸರಣ
 • ಸಾಹಿತ್ಯ ಹುಡುಕಾಟ (ಜಾಲತಾಣದ ಮೂಲಕ ಮತ್ತು ಸಿಡಿ-ರೋಮ್ ದತ್ತಾಂಶ ಆಧಾರಗಳು)
 • ಮಾಹಿತಿ ವಿಶ್ಲೇಷಣೆ ಮತ್ತು ಒಟ್ಟುಗೂಡಿಸುವಿಕೆ
 • ಮುದ್ರಣ ಮತ್ತು ನಕಲು ಮಾಡುವ ಸೇವೆಗಳು (ರಿಪ್ರೊಗ್ರಾಫಿಕ್ ಸೇವೆಗಳು)
 • ಪರಾಮರ್ಶ ಮತ್ತು ಉಲ್ಲೇಖ ಸೇವೆಗಳು
 • ಅಂತರ ಗ್ರಂಥಾಲಯದಿಂದ ತೆಗೆದುಕೊಳ್ಳುವ ಸೌಲಭ್ಯಗಳು
 • ಅಂತರ್ಜಾಲ ಮತ್ತು ಇ-ಸಂಪನ್ಮೂಲ ಪ್ರವೇಶ

ಗ್ರಂಥಾಲಯ ಸಂಪನ್ಮೂಲಗಳು

ದತ್ತಾಂಶ ಮಾದರಿಗಳು ೨೦೧೮ ರ ವರ್ಷದ ಮುದ್ರಣ ನಿಯತಕಾಲಿಕ ಚಂದಾದಾರಿಕೆ
ನಿಯತಕಾಲಿಕೆಯ ಹೆಸರು ಪ್ರಕಾಶಕರು
ಮಾನದಂಡ :ಅಂತರರಾಷ್ಟ್ರೀಯ ಪತ್ರಿಕೆ ಎಮರಾಲ್ಡ್
ಬದಲಾಯಿಸಿ: ಉನ್ನತ ಕಲಿಕೆಯ ನಿಯತಕಾಲಿಕೆ ಟೇಲರ್ & ಫ್ರಾನ್ಸಿಸ್
ಶೈಕ್ಷಣಿಕ ನಿರ್ವಹಣೆ, ಆಡಳಿತ ಮತ್ತು ನಾಯಕತ್ವ ಸೇಜ್ ಪ್ರಕಟಣೆಗಳು
ಶೈಕ್ಷಣಿಕ ನೀತಿ ಸೇಜ್ ಪ್ರಕಟಣೆಗಳು
ಅಂತರರಾಷ್ಟ್ರೀಯ ಶಿಕ್ಷಣದಲ್ಲಿ ಅಧ್ಯಯನ ಪತ್ರಿಕೆ ಸೇಜ್ ಪ್ರಕಟಣೆಗಳು
ಮುಕ್ತ ಕಲಿಕೆ: ಮುಕ್ತ ಮತ್ತು ದೂರ ಶಿಕ್ಷಣದ ಕಲಿಕಾ ಪತ್ರಿಕೆ ಟೇಲರ್ & ಫ್ರಾನ್ಸಿಸ್
ಶಿಕ್ಷಣದಲ್ಲಿ ಗುಣಮಟ್ಟ ಭರವಸೆ ಎಮರಾಲ್ಡ್
ಉನ್ನತ ಶಿಕ್ಷಣದ ಕಾಲಾನುಕ್ರಮದ ವರದಿ ಸಿ ಹೆಚ್ ಇ
ಉನ್ನತ ಶಿಕ್ಷಣದ ಪೂರಕ ಸಮಯ ಟಿ ಹೆಚ್ ಎ
ದಿ ಟಿಕ್ಯೂಎಮ್ ಪತ್ರಿಕೆ (ನಿಯತಕಾಲಿಕೆ) ಎಮರಾಲ್ಡ್

(ಒಪ್ಯಾಕ್- ಆನ್‌ಲೈನ್ ಪಬ್ಲಿಕ್ ಆಕ್ಸೆಸ್ ಕ್ಯಾಟಲಾಗ್)

ನ್ಯಾಕ್ ಗ್ರ೦ಥಾಲಯ ೨೦೦೯ ರಿಂದ ನ್ಯೂಜೆನ್ಲಿಬ್ ತಂತ್ರಾಂಶವನ್ನು ಬಳಸುತ್ತಿದೆ. ಆದೇಶ, ತಾಂತ್ರಿಕ ಸಂಸ್ಕರಣ, ಪ್ರವೇಶಿಸುವಿಕೆ, ಮತ್ತು ದಾಖಲೆಗಳ ಪ್ರಕ್ರಿಯೆಯ ಪರಿಚಲನೆ ಮುಂತಾದ ಎಲ್ಲಾ ಗ್ರ೦ಥಾಲಯ ಚಟುವಟಿಕೆಗಳನ್ನು ನ್ಯೂಜೆನ್ಲಿಬ್ ನಡೆಸುತ್ತಾರೆ. ಬಳಕೆದಾರರು ಪ್ರಸ್ತುತ ಗ್ರಂಥಾಲಯ ಸಂಗ್ರಹ, ಪುಸ್ತಕಗಳ ಸ್ಥಿತಿ, ನ್ಯಾಕ್-ಸಹಭಾಗಿತ್ವದಲ್ಲಿ ಸಮ್ಮೇಳನ ನಡಾವಳಿಗಳು ಮತ್ತು ಅಂತರ ಗ್ರಂಥಾಲಯದಿಂದ ಗ್ರಂಥ ಎರವಲು ಕೋರಿಕೆಗಳನ್ನು ಸಲ್ಲಿಸುವುದು- ಈ ಎಲ್ಲಾ ಸೇವೆ ಪಡೆಯಬಹುದು.

For accessing of NAAC Library OPAC please click following link.

NAAC LIBRARY OPAC

ನಮ್ಮನ್ನು ಸಂಪರ್ಕಿಸಿ

ಡಾ. ವಾಹಿದುಲ್ ಹಸನ್
ಗ್ರಂಥಪಾಲಕರು (ಐ / ಸಿ)
ರಾಷ್ಟ್ರೀಯ ಮೌಲ್ಯೀಕರಣ ಮತ್ತು ಮಾನ್ಯತಾ ಪರಿಷತ್ತು
ಅಂಚೆ ಪೆಟ್ಟಿಗೆ ಸಂಖ್ಯೆ ೧೦೭೫,
ನಾಗರಭಾವಿ, ಬೆಂಗಳೂರು -೫೬೦ ೦೭೨, ಕರ್ನಾಟಕ, ಭಾರತ
ದೂರವಾಣಿ: ೦೮೦-೨೩೦೦೫೧೫೦