ಯಾವುದೇ ರಾಷ್ಟ್ರದ ಅಭಿವೃದ್ಧಿಯಲ್ಲಿ ಶಿಕ್ಷಣವು ಮಹತ್ವದ ಪಾತ್ರವಹಿಸುತ್ತದೆ. ಆದ್ದರಿಂದ, ಉನ್ನತ ಶಿಕ್ಷಣದ ಪರಿಮಾಣ (ಹೆಚ್ಚಿದ ಪ್ರವೇಶ) ಮತ್ತು ಗುಣಮಟ್ಟ (ಪ್ರಸ್ತುತದ ಶೈಕ್ಷಣಿಕ ಕಾರ್ಯಕ್ರಮಗಳ ಪ್ರಸ್ತುತತೆ ಮತ್ತು ಶ್ರೇಷ್ಠತೆ) ಗಳಿಗೆ ಹೆಚ್ಚಿನ ಮೌಲ್ಯವಿದೆ. ನ್ಯಾಕ್ ಸಿದ್ಧಗೊಳಿಸಿರುವ ಮಾನದಂಡಗಳಿಗನುಸಾರವಾಗಿ ಸ್ವಯಂ ಪರಿವೀಕ್ಷಣೆ ಮೂಲಕ ತಮ್ಮ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುವ ಮತ್ತು ನ್ಯಾಕ್ ಸಂಸ್ಥೆಯ ಚಟುವಟಿಕೆಗಳಲ್ಲಿ ಅವುಗಳಿಗೆ ಭಾಗವಹಿಸಲು ಅವಕಾಶವನ್ನು ಒದಗಿಸಲು ನ್ಯಾಕ್ ಸ್ಥಾಪಿತವಾಗಿದೆ. .
ಮಾನ್ಯತೆ
ಮಾನ್ಯತೆಯ ಪ್ರಯೋಜನಗಳು
- ಸಂಸ್ಥೆಯು ತನ್ನ ಸಾಮರ್ಥ್ಯ, ದೌರ್ಬಲ್ಯ ಮತ್ತು ಅವಕಾಶಗಳನ್ನು ಪ್ರಜ್ಞಾವಂತ ವಿಮರ್ಶೆ ಪ್ರಕ್ರಿಯೆಯ ಮೂಲಕ ಅರಿಯುವುದು
- ಯೋಜನೆ ಮತ್ತು ಸಂಪನ್ಮೂಲ ಹಂಚಿಕೆಗಳ ಆಂತರಿಕ ಕ್ಷೇತ್ರಗಳನ್ನು ಗುರುತಿಸುವಿಕೆ
- ಆವರಣದಲ್ಲಿ ಜವಾಬ್ದಾರಿ ಮತ್ತು ಸಹಕಾರಗಳೊಡನೆ ಸಹೋದ್ಯೋಗಿತ್ವ
- ನಿಧಿ ಸಂಸ್ಥೆಗಳು ಕಾರ್ಯಕ್ಷಮತೆ ನಿಧಿಯ ಉದ್ದೇಶದ ದತ್ತಾಂಶವನ್ನು ಅರಸುತ್ತದೆ
- ಶಿಕ್ಷಣ ವಿಧಾನದಲ್ಲಿ ನವೀನ ಮತ್ತು ಆಧುನಿಕ ವಿಧಾನಗಳ ಶಿಕ್ಷಣವನ್ನು ಪ್ರಾರಂಭಿಸಲು
- ಸಂಸ್ಥೆಗಳಿಗೆ ಹೊಸದಾದ ಮಾರ್ಗಸೂಚಿ ಮತ್ತು ಗುರುತಿಸಿಕೊಳ್ಳುವಿಕೆ
- ಸಮಾಜವು ಅರ್ಹ ಶಿಕ್ಷಣದ ಲಭ್ಯತೆ ಬಗ್ಗೆ ವಿಶ್ವಾಸಾರ್ಹ ಮಾಹಿತಿಯನ್ನು ಅರಸುತ್ತದೆ.
- ಉದ್ಯಮದವರು ತಮ್ಮ ತಮ್ಮ ಸಂಸ್ಥೆಯ ಭವಿಷ್ಯದ ನೇಮಕಾತಿಗೆ ಅರ್ಹವಾದ ಉದ್ಯೋಗಿಗಳ ಶಿಕ್ಷಣದ ಗುಣಮಟ್ಟದ ಬಗ್ಗೆ ವಿಶ್ವಾಸಾರ್ಹ ಮಾಹಿತಿಗಾಗಿ ಅರಸುತ್ತಾರೆ.
- ಒಳ ಮತ್ತು ಅಂತರ-ಸಾಂಸ್ಥಿಕ ಪರಸ್ಪರ ಕ್ರಿಯೆಗಳು

ಅರ್ಹತಾ ಮಾನದಂಡಗಳು
ಉನ್ನತ ಶಿಕ್ಷಣ ಸಂಸ್ಥೆಗಳ (ಹೆಚ್ಇಐ), ಕನಿಷ್ಟ ಎರಡು ತಂಡಗಳ ವಿದ್ಯಾರ್ಥಿಗಳು ಪದವೀಧರರಾದ ದಾಖಲೆಯನ್ನು ಒದಗಿಸಿದರೆ ಅಥವಾ ಸಂಸ್ಥೆಯು ಆರು ವರ್ಷಗಳ ಕಾಲ ಅಸ್ತಿತ್ವದಲ್ಲಿದ್ದರೆ(ಯಾವುದು ಮೊದಲೋ ಅದು), ಮತ್ತು ಕಾಣಿಸಿರುವ ಇತರ ಷರತ್ತುಗಳನ್ನು ಪೂರೈಸಿದರೆ ಹಾಗೂ ಮುಂದೆ ಕಾಣಿಸಿರುವ ಇತರ ಉಪಬಂಧಗಳಲ್ಲಿ ಸೇರಿದ್ದರೆ ನ್ಯಾಕ್ ಮೌಲ್ಯೀಕರಣ ಮತ್ತು ಮಾನ್ಯತೆಯ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತದೆ. ಇತರ ನಿಬಂಧನೆಗಳನ್ನು ಕೆಳಗೆ ಉಲ್ಲೇಖಿಸಲಾಗಿದೆ:
1. ವಿಶ್ವವಿದ್ಯಾಲಯಗಳು (ಕೇಂದ್ರೀಯ / ರಾಜ್ಯ / ಖಾಸಗಿ / ಡೀಮ್ಡ್ -ಟು ಬಿ) ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳು
- ಸಂಸ್ಥೆಗಳು/ ಡೀಮ್ಡ್ ಯೂನಿವರ್ಸಿಟಿಗಳು / ಆಫ್ ಕ್ಯಾಂಪಸ್ ಸಂಸ್ಥೆಗಳು / ಎಂಎಚ್ಆರ್ಡಿ / ಯುಜಿಸಿಯಿಂದ ಅನುಮೋದನೆಗೊಂಡಿರಬೇಕು. ಅನುಮತಿ ಪಡೆಯದ ಆಫ್ ಕ್ಯಾಂಪಸ್ ಸಂಸ್ಥೆಗಳನ್ನು ನ್ಯಾಕ್ ಮೌಲ್ಯೀಕರಣಕ್ಕೆ ಪರಿಗಣಿಸುವುದಿಲ್ಲ.
- ಈ ಸಂಸ್ಥೆಗಳಲ್ಲಿ, ಕ್ಯಾಂಪಸ್ ನಲ್ಲಿ ಜರಗುವ ಪೂರ್ಣಾವಧಿ ಬೋಧನೆ/ಸಂಶೋಧನೆಗಳಲ್ಲಿ ತೊಡಗಿಸಿಕೊಂಡಿರುವ ಹಾಗೂ ನಿಯಮಿತವಾಗಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳನ್ನು ಹೊಂದಿರಬೇಕು.
- ರಾಷ್ಟ್ರೀಯ ಪ್ರಾಮುಖ್ಯತೆಗಳ ವಿಶ್ವವಿದ್ಯಾನಿಲಯಗಳು / ಸಂಸ್ಥೆಗಳ ಭಾಗವಾಗಿ ದೇಶದೊಳಗೆ ಎಲ್ಲಿಯಾದರೂ ನಿಯಮಿತವಾಗಿ ಸ್ಥಾಪಿತವಾದ ಅಧ್ಯಯನ ಕೇಂದ್ರಗಳನ್ನು ಮೌಲ್ಯೀಕರಣ ಮತ್ತು ಮಾನ್ಯತೆಯ ಪ್ರಕ್ರಿಯೆಗೆ ಪರಿಗಣಿಸಲಾಗುತ್ತದೆ.
- ಯಾವುದೇ ಸಂಸ್ಥೆಯ ವಿದೇಶಿ ಘಟಕಗಳ ಮಾನ್ಯತಾ ಪ್ರಧಾನ ಪ್ರಕ್ರಿಯೆಯನ್ನು ನ್ಯಾಕ್ ಕೈಗೆತ್ತಿಕೊಳ್ಳುವುದಿಲ್ಲ.
2.ಸ್ವಾಯತ್ತ ಕಾಲೇಜುಗಳು / ಘಟಕ ಕಾಲೇಜುಗಳು / ಅಂಗಸಂಸ್ಥೆ ಕಾಲೇಜುಗಳು (ಯು.ಜಿ.ಸಿಯಿಂದ ಅಂಗಸಂಸ್ಥೆಯಾಗಿ ಗುರುತಿಸಲ್ಪಟ್ಟ ವಿಶ್ವವಿದ್ಯಾನಿಲಯಗಳಿಗೆ ಸಂಬಂಧಪಟ್ಟವು)
- ಕಾಲೇಜುಗಳು ಯುಜಿಸಿಯಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯವೊಂದಕ್ಕೆ ಅಂಗಸಂಸ್ಥೆಯಾಗಿರಬೇಕು. ಖಾಸಗಿ ಹಾಗೂ ಡೀಮ್ಡ್ ಯೂನಿವರ್ಸಿಟಿಯ ಕಾಲೇಜುಗಳನ್ನು ವಿಶ್ವವಿದ್ಯಾಲಯದ ಭಾಗವಾಗಿ ಪರಿಗಣಿಸುವುದರಿಂದ ಅಂತಹ ಕಾಲೇಜುಗಳನ್ನು ಸ್ವತಂತ್ರವಾಗಿ ಮಾನ್ಯತೆಗಾಗಿ ಪರಿಗಣಿಸಲಾಗುವುದಿಲ್ಲ. ಅವುಗಳು ಸಂಬಂಧಿಸಿದ ವಿಶ್ವವಿದ್ಯಾಲಯಗಳೊಡನೆಯೇ ಮಾನ್ಯತೆಗೆ ನ್ಯಾಕ್ ಅನ್ನು ಸಂಪರ್ಕಿಸಬೇಕು.
- ಕಾಲೇಜುಗಳು / ಸಂಸ್ಥೆಗಳು ಒಂದು ವಿಶ್ವವಿದ್ಯಾನಿಲಯಕ್ಕೆ ಸಂಬಂಧಿಸಿಲ್ಲವಾದರೂ ಕಾನೂನುಬದ್ಧ ವೃತ್ತಿಪರ ನಿಯಂತ್ರಕ ಮಂಡಳಿಗಳಿಂದ ಗುರುತಿಸಲ್ಪಟ್ಟ ಕಾರ್ಯಕ್ರಮಗಳನ್ನು ಒದಗಿಸುತ್ತಿದ್ದರೆ ಮತ್ತು ಭಾರತೀಯ ವಿಶ್ವವಿದ್ಯಾನಿಲಯಗಳ ಸ೦ಘ (ಎಐಯು) ಅಥವಾ ಇತರ ಸರ್ಕಾರಿ ಏಜೆನ್ಸಿಗಳಿಂದ ಗುರುತಿಸಲ್ಪಟ್ಟಿದ್ದರೆ ಪರಿಗಣಿಸಲಾಗುವುದು.
3. ಮಾನ್ಯತೆಯನ್ನು ಪಡೆದ ಉನ್ನತ ಶಿಕ್ಷಣ ಸಂಸ್ಥೆಗಳು ಪುನರ್ ಮೌಲ್ಯಮಾಪನಕ್ಕೆ ಅಥವಾ ನಂತರದ ಆವರ್ತಗಳಿಗೆ (ಆವರ್ತ ೨, ಆವರ್ತ ೩, ಆವರ್ತ ೪) ಅರ್ಜಿ ಸಲ್ಲಿಸುವಿಕೆ
- ತಮ್ಮ ಮಾನ್ಯತಾ ದರ್ಜೆಯನ್ನು ಉತ್ತಮಪಡಿಸಿಕೊಳ್ಳಲು ಬಯಸಿದರೆ ಕನಿಷ್ಠ ಒಂದು ವರ್ಷದ ನಂತರ, ಆದರೆ ಮೂರು ವರ್ಷದೊಳಗೆ ಈ ಉದ್ದೇಶಕ್ಕಾಗಿ ಕಾಲಕಾಲಕ್ಕೆ ನ್ಯಾಕ್ ನಿರ್ದಿಷ್ಟಪಡಿಸಿದ ಇತರ ಷರತ್ತುಗಳನ್ನು ಪೂರೈಸಿ ಮಾನ್ಯತೆ ಮತ್ತು ಪುನರ್ ಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಬಹುದು.
- ಮಾನ್ಯತೆಯ ನಂತರದ ಆವರ್ತಗಳು (ಆವರ್ತ ೨, ಆವರ್ತ ೩, ಆವರ್ತ ೪) ಅನ್ನು ಆಯ್ಕೆಮಾಡುವ ಸಂಸ್ಥೆಗಳು, ಮೌಲ್ಯಮಾಪನ ಅವಧಿಯ ಕೊನೆಯ 6 ತಿಂಗಳ ಅವಧಿಯಲ್ಲಿ, ನ್ಯಾಕ್ ನಿರ್ದಿಷ್ಟಪಡಿಸಿದ ಇತರ ಷರತ್ತುಗಳಿಗೆ ಒಳಪಟ್ಟಿರುತ್ತದೆ, ಗುಣಮಟ್ಟ ಮೌಲ್ಯಮಾಪನಕ್ಕಾಗಿ ಸಾಂಸ್ಥಿಕ ಮಾಹಿತಿಯನ್ನು (ಐ.ಐ.ಕ್ಯೂ.ಎ) ಸಲ್ಲಿಸಬಹುದು.
4. ನ್ಯಾಕ್ ನ ವಿವೇಚನೆಯಲ್ಲಿ ಯಾವುದೇ ಇತರ ಉನ್ನತ ಶಿಕ್ಷಣ ಸಂಸ್ಥೆಗಳು.
- ತಮ್ಮ ಮಾನ್ಯತಾ ದರ್ಜೆಯನ್ನು ಉತ್ತಮಪಡಿಸಿಕೊಳ್ಳಲು ಬಯಸಿದರೆ ಕನಿಷ್ಠ ಒಂದು ವರ್ಷದ ನಂತರ, ಆದರೆ ಮೂರು ವರ್ಷದೊಳಗೆ ಈ ಉದ್ದೇಶಕ್ಕಾಗಿ ಕಾಲಕಾಲಕ್ಕೆ ನ್ಯಾಕ್ ನಿರ್ದಿಷ್ಟಪಡಿಸಿದ ಇತರ ಷರತ್ತುಗಳನ್ನು ಪೂರೈಸಿ ಮಾನ್ಯತೆ ಮತ್ತು ಪುನರ್ ಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಬಹುದು.
ಸೂಚನೆ:
- ಸಂಸ್ಥೆಯ ದೂರದ ಶಿಕ್ಷಣ ಘಟಕಗಳು ಮತ್ತು ವಿದೇಶ ಸ್ಥಳಗಳಲ್ಲಿರುವ ಘಟಕಗಳು ನ್ಯಾಕ್ ಮಾನ್ಯತೆಯ ವ್ಯಾಪ್ತಿಗೆ ಬರುವುದಿಲ್ಲ.
- ನ್ಯಾಕ್ ನಿಂದ ಮೌಲ್ಯೀಕರಣ ಮತ್ತು ಮಾನ್ಯತೆಗಾಗಿ ಅರ್ಜಿ ಸಲ್ಲಿಸಲು ಬಯಸುವ ಎಲ್ಲ ಸಂಸ್ಥೆಗಳು ಅಗತ್ಯ ಮಾಹಿತಿಯನ್ನು ಕಡ್ಡಾಯವಾಗಿ ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆಯ (ಎಐಎಸ್ಹೆಚ್ಇ) ಜಾಲತಾಣದಲ್ಲಿ ಸಲ್ಲಿಸಬೇಕಾಗುತ್ತದೆ. ಐಶೆ ಕೋಡ್ (ಉಲ್ಲೇಖ ಸಂಖ್ಯೆ) ಸಹ ನೋಂದಣಿಯ ಅವಶ್ಯಕತೆಗಳಲ್ಲಿ ಒಂದಾಗಿದೆ.
ಮೌಲ್ಯೀಕರಣ ಘಟಕಗಳು
ಸಾಂಸ್ಥಿಕ ಮಾನ್ಯತೆ
- ವಿಶ್ವವಿದ್ಯಾಲಯ: ವಿಶ್ವವಿದ್ಯಾಲಯ ಕೇಂದ್ರ ಆಡಳಿತ ಸಂರಚನೆ, ಮತ್ತು ಎಲ್ಲಾ ಪದವಿ ಮತ್ತು ಸ್ನಾತಕೋತ್ತರ ಪದವಿ ಇಲಾಖೆಗಳು
- ಕಾಲೇಜು : ಯಾವುದೇ ಕಾಲೇಜು - ಸಂಯೋಜಿತ, ಘಟಕ ಅಥವಾ ಅದರ ಎಲ್ಲಾ ಅಧ್ಯಯನಗಳ ವಿಭಾಗಗಳೊಂದಿಗೆ ಸ್ವಾಯತ್ತತೆ.
ಇಲಾಖಾ ಮಾನ್ಯತೆ
- ಯಾವುದೇ ಇಲಾಖೆ / ಶಾಲೆ / ವಿಶ್ವವಿದ್ಯಾಲಯದ ಕೇಂದ್ರ.
ಪ್ರಸ್ತುತ, ನ್ಯಾಕ್ ಮಾತ್ರ ಸಾಂಸ್ಥಿಕ ಮಾನ್ಯತೆಯನ್ನು ಕೈಗೊಳ್ಳುತ್ತಿದೆ. ಕಾರ್ಯಕ್ರಮ ಮಾನ್ಯತೆ ಕೆಲಸ ಮಾಡಲು ತಜ್ಞರ ಗುಂಪುಗಳನ್ನು ರಚಿಸಲಾಗಿದೆ.
ಪ್ರಕ್ರಿಯೆ
ಮಾನದಂಡ ಮತ್ತು ಸಾಪೇಕ್ಷಾಂಕಗಳು
ಮೂರು ವಿಧದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಮಾನದಂಡವಾರು ವ್ಯತ್ಯಯಾತ್ಮಕ ಸಾಪೇಕ್ಷಾಂಕಗಳು ಹೀಗಿವೆ:
ಪಠ್ಯಕ್ರಮದ ಅಂಶಗಳು | 150 (ವಿ) | 150 (ಸ್ವಾಕಾ) | 100 (ಘ ಕಾ) |
ಬೋಧನೆ-ಕಲಿಕೆ ಮತ್ತು ಮೌಲ್ಯಮಾಪನ | 2೦೦ (ವಿ) | 3೦೦ (ಸ್ವಾಕಾ) | 250 (ಘ ಕಾ) |
ಸಂಶೋಧನೆ, ಆವಿಷ್ಕಾರ ಮತ್ತು ವಿಸ್ತರಣೆ | 250 (ವಿ) | 150 (ಸ್ವಾಕಾ) | 120 (ಘ ಕಾ) |
ಮೂಲಸೌಕರ್ಯ ಮತ್ತು ಕಲಿಕಾ ಸಂಪನ್ಮೂಲಗಳು | 100 (ವಿ) | 100 (ಸ್ವಾಕಾ) | 100 (ಘ ಕಾ) |
ವಿದ್ಯಾರ್ಥಿ ಬೆಂಬಲ ಮತ್ತು ಪ್ರಗತಿ | 100 (ವಿ) | 100(ಸ್ವಾಕಾ) | 130 (ಘ ಕಾ) |
ಆಡಳಿತ, ನಾಯಕತ್ವ ಮತ್ತು ನಿರ್ವಹಣೆ | 100 (ವಿ) | 100 (ಸ್ವಾಕಾ) | 100 (ಘ ಕಾ) |
ಸಾಂಸ್ಥಿಕ ಮೌಲ್ಯಗಳು ಮತ್ತು ಅತ್ಯುತ್ತಮ ಆಚರಣೆಗಳು | 100 (ವಿ) | 100 (ಸ್ವಾಕಾ) | 100 (ಘ ಕಾ) |
ಪ್ರಧಾನ ಸೂಚಕಗಳು
ಪ್ರತಿ ಮಾನದಂಡದ ಅಡಿಯಲ್ಲಿ ಕೆಲವು ಪ್ರಧಾನ ಸೂಚಕಗಳನ್ನು ಗುರುತಿಸಲಾಗುತ್ತದೆ. ಈ ಪ್ರಧಾನ ಸೂಚಕಗಳನ್ನು(ಕೆಐ) ಬಳಸಿ ಮತ್ತಷ್ಟು ಸ್ಪಷ್ಟ ಚಿತ್ರಣವನ್ನು ಪಡೆದು ಅವುಗಳಿಂದ ಉನ್ನತ ಶಿಕ್ಷಣ ಸಂಸ್ಥೆಗಳ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳಲಾಗುತ್ತದೆ.
ಶ್ರೇಣೀಕರಣ
- ಅಕ್ಷರ ದರ್ಜೆಗಳು ಅಂಕಿಕ ಅಂಶಗಳಾಗಿ ಪರಿವರ್ತನೆಯಾಗಿವೆ (ಸಂಚಿತ ಗ್ರೇಡ್ ಪಾಯಿಂಟ್ ಸರಾಸರಿಯಲ್ಲಿ ಒಟ್ಟಾರೆ ಅಂಕಗಳು)
- ಗುಣಾತ್ಮಕ ಅಳತೆಗಳು ಶ್ರೇಣೀಕೃತ ಅಂಕಗಳಾಗಿ ಪರಿವರ್ತನೆಯಾಗಿವೆ
- ಅಂಕಗಳ ಸಾಮಾನ್ಯೀಕರಣಕ್ಕಾಗಿ ವ್ಯಾಪಕ ವ್ಯಾಪ್ತಿ
- ಹೆಚ್ಚಿನ ಪೂರ್ವಾಗ್ರಹಗಳನ್ನು ಕಡಿಮೆ ಮಾಡಬಹುದು(ಯಾವುದಾದರೂ ಇದ್ದರೆ )
- ಎರಡು ಅಕ್ಷರದ ಶ್ರೇಣಿಗಳ ನಡುವೆ ಒಂದು ಅಂಕದ ವ್ಯತ್ಯಾಸ, ಎರಡು ಸತತ ಅಕ್ಷರದ ಶ್ರೇಣಿಗಳ ನಡುವೆ ೫೦ ಅಥವಾ ೧೦೦ ಅಂಕಗಳನ್ನು ನಿಯೋಜಿಸಿರುವುದರಿಂದ ಪ್ರಕ್ರಿಯೆಯು ಹೆಚ್ಚು ನಿಖರವಾಗಿರುತ್ತದೆ.
- ವ್ಯತ್ಯಾಸ ಮತ್ತು ಮಾನದಂಡದ ವ್ಯತ್ಯಾಸಗಳು ಕಡಿಮೆಯಾಗುವುದರಿಂದ ಸಾಪೇಕ್ಷ ಮೌಲ್ಯಮಾಪನ ಹೆಚ್ಚು ನಿಖರವಾಗಿರುತ್ತದೆ.
- ಅಂತರ್-ಪರಿಶೀಲನಾ ತಂಡದ ವ್ಯತ್ಯಾಸಗಳು ಗಣನೀಯವಾಗಿ ಕಡಿಮೆಯಾಗುತ್ತವೆ
- ಯಾವುದೇ ಹಂತದಲ್ಲಿ ಹೊಂದಾಣಿಕೆಗೆ ಅತ್ಯಂತ ಕಡಿಮೆ ಅವಕಾಶ ಇರುವುದರಿಂದ, ಪರಿಶೀಲನಾ ತಂಡದ ತೀರ್ಪು ಹೆಚ್ಚು ನಿಖರವಾಗಿರುತ್ತದೆ.
ಕುಂದುಕೊರತೆ ನಿವಾರಣೆ
ನ್ಯಾಕ್ ಮೌಲ್ಯಮಾಪನ ಮತ್ತು ಮಾನ್ಯತಾ ಪ್ರಕ್ರಿಯೆಯನ್ನು ಮೌಲ್ಯಮಾಪನಕ್ಕೆ ಒಳಪಡುವ ಸಂಸ್ಥೆಯೊಡನೆ ಪಾಲುದಾರಿಕೆಯೊಡನೆ ನಡೆಸುವ ಜಂಟಿ ಕಾರ್ಯಾಚರಣೆ ಎಂದು ಭಾವಿಸುತ್ತದೆ. ಪ್ರಕ್ರಿಯೆಯ ಪ್ರತಿಯೊಂದು ಹಂತವೂ ಪಾರದರ್ಶಕತೆಯಿಂದ ಗುರುತಿಸಲ್ಪಟ್ಟಿದೆ. ಪ್ರಕ್ರಿಯೆಯ ವಿವಿಧ ಹಂತಗಳಲ್ಲಿ ಪರಿಶೀಲನಾ ತಂಡದ ಸ್ವಂತ ಹಿತಾಸಕ್ತಿ ನಿವಾರಿಸುವುದು, ಭೇಟಿ ನೀಡುವ ವೇಳಾಪಟ್ಟಿಯನ್ನು ಯೋಜಿಸುವುದು, ತಂಡವು ಆವರಣ ಇತ್ಯಾದಿಗಳನ್ನು ಬಿಟ್ಟು ಹೋಗುವ ಮೊದಲು ಪರಿಶೀಲನಾ ತಂಡದ ಕರಡು ವರದಿಯನ್ನು ಹಂಚಿಕೊಳ್ಳುವುದು- ಈ ಎಲ್ಲಾ ಹಂತಗಳಲ್ಲಿ ಸಂಸ್ಥೆಯೊಡನೆ ಸಮಾಲೋಚನೆ ನಡೆಯುತ್ತದೆ. ಈ ಸಹಭಾಗಿತ್ವದ ವಿಧಾನದ ಹೊರತಾಗಿಯೂ, ಸಂಸ್ಥೆಗಳಿಗೆ ಕೆಲವು ಕುಂದುಕೊರತೆ ಕಾಣಬಹುದು. ಆದ್ದರಿಂದ, ಪ್ರಕ್ರಿಯೆ ಅಥವಾ ಅದರ ಫಲಿತಾಂಶದ ಬಗ್ಗೆ ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳ ಬಗ್ಗೆ ಸಂಸ್ಥೆಗಳಿಗೆ ಅನ್ಯಾಯವಾಗದಂತೆ ವಿಮರ್ಶೆ ಕಾರ್ಯವಿಧಾನವನ್ನು ಒದಗಿಸಲು, ನ್ಯಾಕ್ ಕುಂದುಕೊರತೆ ಪರಿಹಾರ ಮಾರ್ಗಸೂಚಿಗಳನ್ನು ರೂಪಿಸಿದೆ. Grievance Redressal Guidelines.
ಎ & ಎ ಫಲಿತಾಂಶವನ್ನು ಘೋಷಿಸಿದಾಗ, ಮಾನ್ಯತೆ ಸ್ಥಿತಿಗೆ ತೃಪ್ತಿ ಹೊಂದದ ಸಂಸ್ಥೆ ಈ ಮುಂದಿನವುಗಳನ್ನು ಸಲ್ಲಿಸಬಹುದು:
- ನ್ಯಾಕ್ ನಿಂದ ಮಾನ್ಯತಾ ಪ್ರದಾನದ ಪತ್ರದ ಸ್ವೀಕೃತಿಯಿಂದ ೩೦ ದಿನಗಳಲ್ಲಿ ನ್ಯಾಕ್ ಅನ್ನು ತಲುಪುವಂತೆ ಮನವಿಪತ್ರವನ್ನು ಸಲ್ಲಿಸಬಹುದು. ಅದರಲ್ಲಿ ಸಂಸ್ಥೆ ಮಾನದಂಡವಾರು ಅಂಕಗಳನ್ನು ಒದಗಿಸುವಂತೆ ಕೋರಬಹುದಾಗಿದೆ.
- ನ್ಯಾಕ್ ನಿಂದ ಮಾನದಂಡವಾರು ಅಂಕಗಳ ಮಾಹಿತಿ ಪಡೆದುಕೊಂಡ ದಿನಾಂಕದಿಂದ ೩೦ ದಿನಗಳ ಒಳಗೆ ನ್ಯಾಕ್ ಅನ್ನು ತಲುಪುವಂತೆ, ನ್ಯಾಕ್ ನಿಂದ ಸೂಚಿಸಲಾದ ನಮೂನೆಯಲ್ಲಿ ಮೇಲ್ಮನವಿಗಾಗಿ ಅರ್ಜಿ ಸಲ್ಲಿಸುವುದು (ಕುಂದುಕೊರತೆ ನಿವಾರಣಾ ಮಾರ್ಗಸೂಚಿಗಳನ್ನು ನೋಡಿ). ಮೇಲ್ಮನವಿಗಾಗಿ ಅರ್ಜಿಯನ್ನು ನಿಗದಿತವಾದ ಮರುಪಾವತಿಸಲಾಗದ ರೂ ೧,೦೦,೦೦೦ / - ಜೊತೆಗೆ ಸೇವಾ ತೆರಿಗೆ (ಜಿಎಸ್ಟಿ @ ೧೮%) ದಷ್ಟು ಮೊಬಲಗಿನ ಶುಲ್ಕದೊಂದಿಗೆ ಸಲ್ಲಿಸಬೇಕು.
ನ್ಯಾಕ್ ನ ಮೇಲ್ಮನವಿ ಸಮಿತಿ / ಕಾರ್ಯನಿರ್ವಾಹಕ ಸಮಿತಿಯಿಂದ ಮೇಲ್ಮನವಿ ತೀರ್ಮಾನಗೊಳ್ಳುವವರೆಗೂ ಯಾವುದೇ ವಿಷಯದಲ್ಲಿ ಯಾವುದೇ ಪತ್ರವ್ಯವಹಾರವನ್ನೂ (ಫೋನ್ ಕರೆಗಳನ್ನು ಒಳಗೊಂಡಂತೆ) ಪರಿಗಣಿಸುವುದಿಲ್ಲ. ಉದ್ದೇಶಕ್ಕಾಗಿ ರಚಿಸಲಾದ ಮೇಲ್ಮನವಿ ಸಮಿತಿಯು ಮೇಲ್ಮನವಿಯನ್ನು ಪರಿಗಣಿಸುತ್ತದೆ ಮತ್ತು ಕಾರ್ಯನಿರ್ವಾಹಕ ಸಮಿತಿಗೆ (ಇಸಿ) ಶಿಫಾರಸುಗಳನ್ನು ಮಾಡುತ್ತದೆ. ಈ ಹಿನ್ನಲೆಯಲ್ಲಿ ಕಾರ್ಯ ನಿರ್ವಾಹಕ ಸಮಿತಿ ತೆಗೆದುಕೊಳ್ಳುವ ನಿರ್ಧಾರವನ್ನು ಸಂಸ್ಥೆ ಒಪ್ಪಿಕೊಳ್ಳಲೇ ಬೇಕಾಗುತ್ತದೆ.
ಮೇಲ್ಮನವಿಗಳ ಸಮಿತಿಯ ವ್ಯಾಪ್ತಿ ವಿಸ್ತರಣೆ
೨೦೧೦ ರ ಸೆಪ್ಟೆಂಬರ್ ೪ ರಂದು ೫೩ ನೇ ಸಭೆಯಲ್ಲಿ ಕಾರ್ಯನಿರ್ವಾಹಕ ಸಮಿತಿಯು (ಇಸಿ), ಸಭೆಯಲ್ಲಿ ಮೇಲ್ಮನವಿಗಳ ಸಮಿತಿಯು ಸಂಸ್ಥೆಗಳಿಂದ ಮೇಲ್ಮನವಿಗಳನ್ನು ಪರಿಗಣಿಸುವುದು ಮಾತ್ರವಲ್ಲದೆ ಕಾರ್ಯನಿರ್ವಾಹಕ ಸಮಿತಿಯು ಸೂಚಿಸಿದ , ಮೌಲ್ಯೀಕರಣ ಮತ್ತು ಮಾನ್ಯತಾ ಪ್ರದಾನದ ಪ್ರಕ್ರಿಯೆಯಲ್ಲಿನ ವ್ಯತ್ಯಯ, ಉಲ್ಲಂಘನೆ ಅಥವಾ ದೂರುಗಳ ಕುರಿತಾದ ಪ್ರಕರಣಗಳನ್ನೂ ಪರಿಗಣಿಸಬೇಕೆಂದು ಪುನರುಚ್ಚರಿಸಿತು.
ಮರುಮೌಲ್ಯೀಕರಣ
ಮಾನ್ಯತಾ ಪ್ರದಾನವಾದ ನಂತರ ಅದನ್ನು ಸುಧಾರಿಸಿಕೊಳ್ಳಲು ಇಚ್ಛಿಸುವ ಸಂಸ್ಥೆಗಳು, ಮರು-ಮೌಲ್ಯೀಕರಣಕ್ಕಾಗಿ ಸ್ವತಃ ಮುಂದಾಗ ಬಹುದು, ಮಾನ್ಯತಾ ಪ್ರದಾನವಾದ ನಂತರ ಕನಿಷ್ಠ ಒಂದು ವರ್ಷ ಮುಗಿದ ನಂತರ ಮತ್ತು ಮೂರು ವರ್ಷಗಳ ಒಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಮರು ಮೌಲ್ಯೀಕರಣಕ್ಕಾಗಿ ಅನುಸರಿಸಬೇಕಾದ ಕೈಪಿಡಿಯು ಮೌಲ್ಯೀಕರಣ ಮತ್ತು ಮಾನ್ಯತೆಯ ಕೈಪಿಡಿಯು ಎರಡೂ ಒಂದೇ ಆಗಿರುತ್ತದೆ. ಆದಾಗ್ಯೂ, ಸಂಸ್ಥೆಯು ಮೊದಲ ಮೌಲ್ಯೀಕರಣ ಮತ್ತು ಮಾನ್ಯತಾ ಶಿಫಾರಸುಗಳ ಆಧಾರದ ಮೇಲೆ ನಿರ್ದಿಷ್ಟವಾದ ಪ್ರತಿಕ್ರಿಯೆಗಳನ್ನು ನೀಡಬೇಕು ಮತ್ತು ಸಂಸ್ಥೆಯು ಗುಣಮಟ್ಟದಲ್ಲಿ ಸಾಧಿಸಿರುವ ನಿರ್ದಿಷ್ಟ ಸುಧಾರಣೆಗಳನ್ನು ತಿಳಿಸಬೇಕು. ಮರು ಮೌಲ್ಯೀಕರಣಕ್ಕೆ ಶುಲ್ಕವು ಮೂಲ ಮೌಲ್ಯಮಾಪನ ಮತ್ತು ಮಾನ್ಯತೆಗೆ ಇದ್ದಷ್ಟೇ ಇರುತ್ತದೆ.
ಮಾನ್ಯತಾ ಆವರ್ತ
ಮಾನ್ಯತಾ ಪ್ರದಾನವಾದ ನಂತರ ಅದನ್ನು ಸುಧಾರಿಸಿಕೊಳ್ಳಲು ಇಚ್ಛಿಸುವ ಸಂಸ್ಥೆಗಳು, ಮರು-ಮೌಲ್ಯೀಕರಣಕ್ಕಾಗಿ ಸ್ವತಃ ಮುಂದಾಗ ಬಹುದು, ಮಾನ್ಯತಾ ಪ್ರದಾನವಾದ ನಂತರ ಕನಿಷ್ಠ ಒಂದು ವರ್ಷ ಮುಗಿದ ನಂತರ ಮತ್ತು ಮೂರು ವರ್ಷಗಳ ಒಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಮರು ಮೌಲ್ಯೀಕರಣಕ್ಕಾಗಿ ಅನುಸರಿಸಬೇಕಾದ ಕೈಪಿಡಿಯು ಮೌಲ್ಯೀಕರಣ ಮತ್ತು ಮಾನ್ಯತೆಯ ಕೈಪಿಡಿ ಎರಡೂ ಒಂದೇ ಆಗಿರುತ್ತದೆ. ಆದಾಗ್ಯೂ, ಸಂಸ್ಥೆಯು ಮೊದಲ ಮೌಲ್ಯೀಕರಣ ಮತ್ತು ಮಾನ್ಯತಾ ಶಿಫಾರಸುಗಳ ಆಧಾರದ ಮೇಲೆ ನಿರ್ದಿಷ್ಟವಾದ ಪ್ರತಿಕ್ರಿಯೆಗಳನ್ನು ನೀಡಬೇಕು ಮತ್ತು ಸಂಸ್ಥೆಯು ಗುಣಮಟ್ಟದಲ್ಲಿ ಸಾಧಿಸಿರುವ ನಿರ್ದಿಷ್ಟ ಸುಧಾರಣೆಗಳನ್ನು ತಿಳಿಸಬೇಕು. ಮರು ಮೌಲ್ಯೀಕರಣಕ್ಕೆ ಶುಲ್ಕವು ಮೂಲ ಮೌಲ್ಯಮಾಪನ ಮತ್ತು ಮಾನ್ಯತೆಗೆ ಇದ್ದಷ್ಟೇ ಇರುತ್ತದೆ. ಯಾವುದೇ ಸಂಸ್ಥೆಯು ಮೌಲ್ಯಮಾಪನ ಮತ್ತು ಮಾನ್ಯತಾ ಪ್ರಕ್ರಿಯೆಗೆ ಮೊದಲ ಬಾರಿ ಒಳಗಾದರೆ ಅದನ್ನು ಒಂದನೇ ಆವರ್ತವೆಂದು ನಂತರದ ಅನುಕ್ರಮವಾದ ಐದು ವರ್ಷಗಳನ್ನು ಆವರ್ತ ೨ , ಆವರ್ತ ೩ ..... ಮುಂತಾಗಿ ಉಲ್ಲೇಖಿಸಲಾಗುತ್ತದೆ.
ಮೊದಲ ಆವರ್ತಕ್ಕಾಗಿ ಮೊದಲ ಆವರ್ತಕ್ಕಾಗಿ ಮಾನ್ಯತೆಯ ಪ್ರಕ್ರಿಯೆಯನ್ನು ನೋಡಿ
ಆವರ್ತಗಳು ೨, ೩, ಇತ್ಯಾದಿಗಳಿಗಾಗಿ ಈ ಕೆಳಗಿನ ಸಂಗತಿಗಳು ಅಗತ್ಯವಾಗಿರುತ್ತವೆ:
- ಆಂತರಿಕ ಗುಣಮಟ್ಟ ಭರವಸೆ ಕೋಶ ಕ್ರಿಯಾತ್ಮಕವಾಗಿರಬೇಕು.
- ವಾರ್ಷಿಕವಾಗಿ ವಾರ್ಷಿಕ ಗುಣಮಟ್ಟ ಭರವಸೆ ವರದಿಗಳನ್ನು ಸಕಾಲದಲ್ಲಿ ಸಲ್ಲಿಸಿರಬೇಕು.
- ಮಾನ್ಯತೆಯ ಅವಧಿ ಮುಗಿಯುವದಕ್ಕೆ ಆರು ತಿಂಗಳ ಮುಂಚೆಯೇ ಸಂಸ್ಥೆಗಳು 'ಗುಣಮಟ್ಟ ಮೌಲ್ಯಮಾಪನಕ್ಕೆ ಸಾಂಸ್ಥಿಕ ಮಾಹಿತಿಯನ್ನು ಸಲ್ಲಿಸಬೇಕು.
- ಇತರ ಹಂತಗಳು ಮೊದಲ ಆವರ್ತದಲ್ಲಿದ್ದಂತೆಯೇ ಇರುತ್ತವೆ.
ಮೌಲ್ಯೀಕರಣದ ಫಲಿತಾಂಶ
1. ಪರಿಶೀಲನಾ ತಂಡದ ವರದಿ
- ವಿಭಾಗ ೧: ಸಂಸ್ಥೆಯ ಸಾಮಾನ್ಯ ಮಾಹಿತಿ ಮತ್ತು ಅದರ ಸಂದರ್ಭವನ್ನು ನೀಡುತ್ತದೆ.
- ವಿಭಾಗ ೨: ಅಂಶ ಬಿಂದುಗಳೊಡನೆ ವರದಿ ಸಲ್ಲಿಕೆಯ ಬದಲು ಪರಿಶೀಲಕರ ಗುಣಾತ್ಮಕ ಸೂಚಕಗಳ ಮೌಲ್ಯಮಾಪನವನ್ನು ಆಧರಿಸಿದ ಪ್ರಧಾನ ಸೂಚಕವಾರು ವಿಶ್ಲೇಷಣೆಯನ್ನು ನೀಡುತ್ತದೆ. ಇದು ಪರಿಶೀಲನಾ ತಂಡದ ವಿಮರ್ಶಾತ್ಮಕ ವರದಿಯನ್ನಾಧರಿಸಿದ ಗುಣಾತ್ಮಕ, ವಿವರಣೆ ಸಹಿತ ಮೌಲ್ಯಮಾಪನ ವರದಿಯಾಗಿದ್ದು ಸಂಸ್ಥೆಯ ಬಲ,ಮತ್ತು ದೌರ್ಬಲ್ಯಗಳನ್ನು ಮಂಡಿಸುತ್ತದೆ.
- ವಿಭಾಗ ೩: ಸಾಂಸ್ಥಿಕ ಸಾಮರ್ಥ್ಯಗಳು, ದೌರ್ಬಲ್ಯಗಳು, ಅವಕಾಶಗಳು ಮತ್ತು ಸವಾಲುಗಳನ್ನು ಒಳಗೊಂಡಿರುವ ಒಟ್ಟಾರೆ ವಿಶ್ಲೇಷಣೆಯನ್ನು ಪ್ರಸ್ತುತಪಡಿಸುತ್ತದೆ.
- ವಿಭಾಗ ೪: ಸಂಸ್ಥೆಯ ಗುಣಮಟ್ಟದ ವರ್ಧನೆಗೆ ಶಿಫಾರಸುಗಳನ್ನು ದಾಖಲಿಸುತ್ತದೆ. (೧೦ ಕ್ಕಿಂತ ಹೆಚ್ಚು ಪ್ರಮುಖವಾದವುಗಳಲ್ಲ)
2. ಪರಿಮಾಣಾತ್ಮಕ ಮೆಟ್ರಿಕ್ಸ್ (ಕ್ಯೂಎನ್ಎಂ) ಆಧಾರಿತ ಚಿತ್ರಾತ್ಮಕ ನಿರೂಪಣೆ
ಇದು ನ್ಯಾಕ್ ನ ಗುಣಮಟ್ಟ ಸೂಚಕ ಸಂರಚನೆಯಲ್ಲಿನ (ಗುಸೂಸಂ) ಗುಣಾತ್ಮಕ ಸೂಚಕಗಳ ಸಾಂಖ್ಯಿಕ ವಿಶ್ಲೇಷಣೆಯನ್ನಾಧರಿಸಿದ ವ್ಯವಸ್ಥಾ ಜನ್ಯ ಗುಣಮಟ್ಟ ವಿವರದ ಒಂದು ಭಾಗವಾಗಿರುತ್ತದೆ. ಸಂಸ್ಥೆಯ ಲಕ್ಷಣ, ವೈಶಿಷ್ಟ್ಯಗಳನ್ನು ಪರಿಮಾಣಾತ್ಮಕ ಸೂಚಕಗಳ ಮುಖೇನ ಬಿಂಬಿಸಲಾಗುತ್ತದೆ.
3.ಸಾಂಸ್ಥಿಕ ದರ್ಜೆಯ ಪುಟ
ಇದರಲ್ಲಿ ಸಂಸ್ಥೆಯ ಸಾಂಸ್ಥಿಕ ದರ್ಜೆ ಪುಟವನ್ನು ಒಳಗೊಂಡಿರುತ್ತದೆ. ಇದರಲ್ಲಿರುವ ಮಾಹಿತಿಯು ಗುಣಾತ್ಮಕ ಸೂಚಕಗಳು, ಪರಿಮಾಣಾತ್ಮಕ ಸೂಚಕಗಳು ಮತ್ತು ವಿದ್ಯಾರ್ಥಿಗಳ ತೃಪ್ತಿ ಸಮೀಕ್ಷೆ ಗಳನ್ನು ಆಧರಿಸಿರುವ ಲೆಕ್ಕಾಚಾರ ವಿಧಾನದ ಅನ್ವಯ ಲೆಕ್ಕಿಸಿದ್ದಾಗಿರುತ್ತದೆ. ಆದರೆ ಇದು ಒಂದು ತಂತ್ರಾಂಶದಿಂದ ರಚಿಸಲ್ಪಡುತ್ತದೆ.
ಮೇಲಿನ ಮೂರು ಭಾಗಗಳು ಒಟ್ಟಾಗಿ " ನ್ಯಾಕ್ ಮಾನ್ಯತಾ ಫಲಿತಾಂಶ" ದಾಖಲೆಯನ್ನು ರೂಪಿಸುತ್ತವೆ. ಸಂಸ್ಥೆಗಳು ಇದನ್ನು ತಮ್ಮ ಸಾಂಸ್ಥಿಕ ಜಾಲತಾಣದಲ್ಲಿ ಪ್ರಕಟಿಸುವುದು ಕಡ್ಡಾಯವಾಗಿದೆ. ಜೊತೆಗೆ ನ್ಯಾಕ್ ಸಹ ತನ್ನ ಜಾಲತಾಣದಲ್ಲಿ ಇದನ್ನು ಪ್ರಕಟಿಸುತ್ತದೆ ಉನ್ನತ ಶಿಕ್ಷಣ ಸಂಸ್ಥೆಗಳು ತಮ್ಮ ಸಾಂಸ್ಥಿಕ ಜಾಲತಾಣದಲ್ಲಿ ಅದನ್ನು ಪ್ರದರ್ಶಿಸುವುದು ಕಡ್ಡಾಯವಾಗಿದೆ.
ಸಾಂಸ್ಥಿಕ ವ್ಯಾಪ್ತಿ ಸಂಚಿತ ಅಂಕಗಳ ಶ್ರೇಣೀಕೃತ
ಸರಾಸರಿ (ಸಿಜಿಪಿಎ) | ಲೆಟರ್ ಗ್ರೇಡ್ | ಸ್ಥಿತಿ |
---|---|---|
೩.೫೧ - ೪.೦೦ | ಎ ++ | ಮಾನ್ಯತೆ ಪಡೆದಿದೆ |
೩.೨೬ - ೩.೫೦ | ಎ + | ಮಾನ್ಯತೆ ಪಡೆದಿದೆ |
೩.೦೧ - ೩.೨೫ | ಎ | ಮಾನ್ಯತೆ ಪಡೆದಿದೆ |
೨.೭೬ - ೩.೦೦ | ಬಿ ++ | ಮಾನ್ಯತೆ ಪಡೆದಿದೆ |
೨.೫೧ - ೨.೭೫ | ಬಿ + | ಮಾನ್ಯತೆ ಪಡೆದಿದೆ |
೨.೦೧ - ೨.೫೦ | ಬಿ | ಮಾನ್ಯತೆ ಪಡೆದಿದೆ |
೧.೫೧ - ೨.೦೦ | ಸಿ | ಮಾನ್ಯತೆ ಪಡೆದಿದೆ |
<= ೧.೫೦ | ಡಿ | ಮಾನ್ಯತೆ ಪಡೆದಿಲ್ಲ |
ಜುಲೈ ೨೦೧೭ ರಿಂದ ಜಾರಿಗೆ