ರಾಷ್ಟ್ರೀಯ ಮೌಲ್ಯೀಕರಣ ಮತ್ತು ಮಾನ್ಯತಾ ಪರಿಷತ್ತು (ನ್ಯಾಕ್) ಕಾಲೇಜುಗಳು, ವಿಶ್ವವಿದ್ಯಾಲಯಗಳು ಅಥವಾ ಇತರ ಗುರುತಿಸಲ್ಪಟ್ಟ ಸಂಸ್ಥೆಗಳಂತಹ ಉನ್ನತ ಶಿಕ್ಷಣ ಸಂಸ್ಥೆಗಳ (ಹೆಚ್ ಇ ಐ) ಮೌಲ್ಯೀಕರಣ ಮತ್ತು ಮಾನ್ಯತೆ ನೀಡುವ ಪ್ರಕ್ರಿಯೆಯನ್ನು ನಡೆಸುತ್ತದೆ. ಇದು ಸಂಸ್ಥೆಯ ಗುಣಮಟ್ಟವನ್ನು ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಶೈಕ್ಷಣಿಕ ಪ್ರಕ್ರಿಯೆಗಳು ಮತ್ತು ಫಲಿತಾಂಶಗಳು, ಪಠ್ಯಕ್ರಮ ವ್ಯಾಪ್ತಿ, ಬೋಧನೆ- ಕಲಿಕಾ ಪ್ರಕ್ರಿಯೆಗಳು, ಸಿಬ್ಬಂದಿ, ಸಂಶೋಧನೆ, ಮೂಲಭೂತ ಸೌಕರ್ಯ, ಕಲಿಕಾ ಸಂಪನ್ಮೂಲಗಳು, ಸಂಘಟನೆ, ಆಡಳಿತ, ಆರ್ಥಿಕ ಸುಭದ್ರತೆ ಮತ್ತು ವಿದ್ಯಾರ್ಥಿ ಸೇವೆಗಳು ಅದರ ಸಾಧನೆಗಳಿಗೆ ಸಂಬಂಧಿಸಿದಂತೆ ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿ ನ್ಯಾಕ್ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಮೌಲ್ಯಮಾಪನ ಮಾಡುತ್ತದೆ.
ದೃಷ್ಟಿಕೋನ ಮತ್ತು ಗುರಿ
ದೃಷ್ಟಿಕೋನ
ಸ್ವಯಂ ಮತ್ತು ಬಾಹ್ಯ ಗುಣಮಟ್ಟಗಳ ಮೌಲ್ಯಮಾಪನ, ಪ್ರವರ್ತನೆ ಮತ್ತು ಅದನ್ನು ಸುಸ್ಥಿರವಾಗಿರಿಸಲು ಅಗತ್ಯವಾದ ಉಪಕ್ರಮಗಳ ಮೂಲಕ ಭಾರತದಲ್ಲಿನ ಉನ್ನತ ಶಿಕ್ಷಣದ ಮಟ್ಟವನ್ನು ಅದರ ಗುಣಮಟ್ಟ ಪ್ರಮಾಣದಿಂದ ಮಾತ್ರವೇ ವ್ಯಾಖ್ಯಾನಿಸುವಂತೆ ಮಾಡುವುದು.
ಗುರಿ
- ಉನ್ನತ ಶಿಕ್ಷಣ ಸಂಸ್ಥೆಗಳ ಅಥವಾ ಅವುಗಳ ಇತರ ಘಟಕಗಳ ನಿಯತಕಾಲಿಕ ಮೌಲ್ಯಮಾಪನ ಮತ್ತು ಮಾನ್ಯತಾ ಪ್ರದಾನಕ್ಕಾಗಿ ಅಥವಾ ನಿರ್ದಿಷ್ಟ ಶೈಕ್ಷಣಿಕ ಕಾರ್ಯಕ್ರಮಗಳು ಅಥವಾ ಯೋಜನೆಗಳಿಗೆ ವ್ಯವಸ್ಥೆ ಮಾಡುವುದು.
- ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನಾ-ಕಲಿಕೆ ಮತ್ತು ಸಂಶೋಧನೆಯ ಗುಣಮಟ್ಟವನ್ನು ಉತ್ತೇಜಿಸಲು ಶೈಕ್ಷಣಿಕ ವಾತಾವರಣವನ್ನು ಸೃಷ್ಟಿಸುವುದು.
- ಸ್ವಯಂ-ಮೌಲ್ಯಮಾಪನ, ಹೊಣೆಗಾರಿಕೆ, ಸ್ವಾಯತ್ತತೆ ಮತ್ತು ಉನ್ನತ ಶಿಕ್ಷಣದಲ್ಲಿ ನಾವೀನ್ಯತೆ(ಹೊಸ ಬದಲಾವಣೆ)ಗಳನ್ನು ಪ್ರೋತ್ಸಾಹಿಸುವುದು.
- ಗುಣಮಟ್ಟದ-ಸಂಬಂಧಿತ ಸಂಶೋಧನಾ ಅಧ್ಯಯನಗಳು, ಸಲಹಾ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಕೈಗೊಳ್ಳುವುದು ಮತ್ತು
- ಉತ್ತಮ ಗುಣಮಟ್ಟದ ಮೌಲ್ಯಮಾಪನ, ಉತ್ತೇಜನ ಮತ್ತು ಸುಸ್ಥಿರತೆಗಾಗಿ ಉನ್ನತ ಶಿಕ್ಷಣದ ಇತರ ಪಾಲುದಾರರೊಂದಿಗೆ ಸಹಯೋಗಿಯಾಗುವುದು.
ಮೌಲ್ಯ ಚೌಕಟ್ಟು
ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈ ಕೆಳಗೆ ಸೂಚಿಸಿರುವ ಮೌಲ್ಯಗಳನ್ನು ಉತ್ತೇಜಿಸುವುದು
- ರಾಷ್ಟ್ರೀಯ ಅಭಿವೃದ್ಧಿಗೆ ಕೊಡುಗೆ
- ವಿದ್ಯಾರ್ಥಿಗಳ ನಡುವೆ ಜಾಗತಿಕ ಸ್ಪರ್ಧಾತ್ಮಕತೆಯನ್ನು ಬೆಳೆಸುವುದು
- ವಿದ್ಯಾರ್ಥಿಗಳ ನಡುವೆ ಒಂದು ಮೌಲ್ಯ ವ್ಯವಸ್ಥೆಯನ್ನು ಪರಿಚಯಿಸುವುದು
- ತಂತ್ರಜ್ಞಾನದ ಬಳಕೆಯನ್ನು ಪ್ರೋತ್ಸಾಹಿಸುವುದು
- ಶ್ರೇಷ್ಠತೆಗಾಗಿ ಅನ್ವೇಷಣೆ

नेतृत्व
Chairman, EC
ಪ್ರೊ.ಎಂ.ಜಗದೀಶ್ ಕುಮಾರ್ ಅವರು ಮದ್ರಾಸ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದಿಂದ ಎಂಎಸ್ (ಇಇ) ಮತ್ತು ಪಿಎಚ್‌ಡಿ (ಇಇ) ಪದವಿಗಳನ್ನು ಪಡೆದಿದ್ದಾರೆ. ಅವರು ಕೆನಡಾದ ಒಂಟಾರಿಯೊದ ವಾಟರ್‌ಲೂನ "ವಾಟರ್‌ಲೂ ವಿಶ್ವವಿದ್ಯಾಲಯ"ದ ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್ ವಿಭಾಗದಲ್ಲಿ ಪೋಸ್ಟ್ ಡಾಕ್ಟರೇಟ್ ಸಂಶೋಧನೆ ಮಾಡಿದ್ದಾರೆ. ಇವರು ಮೂಲತಃ ದೆಹಲಿಯ ಭಾರತೀಯ ವಿಜ್ಞಾನ ಸಂಸ್ಥೆ (ಐಐಟಿ)ಯಲ್ಲಿ ವಿದ್ಯುತ್ ಎಂಜಿನಿಯರಿಂಗ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು , ಪ್ರಸ್ತುತ ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದಾರೆ ಹಾಗೂ ದೆಹಲಿಯ ಐಐಟಿಯಲ್ಲಿ ಧಾರಣಾಧಿಕಾರವನ್ನು ಹೊಂದಿದ್ದಾರೆ. ಈಗಲೂ ದೆಹಲಿಯ ಐಐಟಿಯಲ್ಲಿ ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಅವರು ಇನ್ನೂ ಬೋಧನೆ ಮತ್ತು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಫಿಲಿಪ್ಸ್ ಸೆಮಿಕಂಡಕ್ಟರ್ಸ್, ನೆದರ್ಲೆಂಡ್ಸ್ ರಿಂದ ದೆಹಲಿಯ ಐಐಟಿಯಲ್ಲಿ ಸ್ಥಾಪಿತವಾಗಿರುವ ಎನ್ ಎಕ್ಸ್ ಪಿ(ಫಿಲಿಪ್ಸ್) ಚೇರ್ ಪ್ರೊಫೆಸರ್ ಹುದ್ದೆ ಕೂಡ ಹೊಂದಿದ್ದರು. ದೆಹಲಿಯ ಐಐಟಿಯಿಂದ ಅವರು ಬೋಧನೆಯಲ್ಲಿ ಶ್ರೇಷ್ಠತೆಗಾಗಿ (ಉನ್ನತ ವರ್ಗ ವಿಭಾಗದಲ್ಲಿ) 2013ರಲ್ಲಿ ಪ್ರಶಸ್ತಿಯನ್ನು ಪಡೆದಿದ್ದಾರೆ.
Read more >>President, GC
Prof. Dhirendra Pal Singh (D. P. Singh) presently working as Chairman, University Grants Commission (UGC), Prof. D. P. Singh has about 34 years of Professional experience in different aspects of educational planning & administration, institution building, teaching & training, research & development, international cooperation etc, in various capacities in different institutions.
Read more >>
Director
ಸಂಸ್ಥೆ
ಆವರಣ

ನ್ಯಾಕ್ ಬೆಂಗಳೂರು ವಿಶ್ವವಿದ್ಯಾನಿಲಯ, ಜ್ಞಾನಭಾರತಿ ಆವರಣದಲ್ಲಿ ಭಾರತ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಎದುರಿಗೆ, ಐದು ಎಕರೆಗಳಷ್ಟು ವಿಸ್ತಾರವಾದ ಆವರಣದಲ್ಲಿ ಸ್ಥಾಪನೆಗೊಂಡಿದೆ. ಮುಕ್ತ ರಾಷ್ಟ್ರೀಯ ವಾಸ್ತುಶಿಲ್ಪ ವಿನ್ಯಾಸ ಸ್ಪರ್ಧೆಯ ಮೂಲಕ ಆಯ್ಕೆಯಾದ ನ್ಯಾಕ್ ಕಚೇರಿಗಳನ್ನು ಹೊಂದಿರುವ ವಿಶಾಲವಾದ ಮತ್ತು ಕಾರ್ಯತ್ಮಕವಾಗಿ ವಿನ್ಯಾಸಗೊಳಿಸಲಾದ ಕಟ್ಟಡವನ್ನು ನಿರ್ಮಿಸಲಾಗಿದೆ. ಇಂಗಾಲದ ತಟಸ್ಥ, ಪರಿಸರ-ಸ್ನೇಹಿ ಪರಿಸರವನ್ನು ಹೊಂದಿರುವ ಇಂಧನ ಸಂರಕ್ಷಣೆ ಮತ್ತು ಮಳೆನೀರನ್ನು ಕೊಯ್ಲು ಮಾಡುವ ಉದ್ದೇಶದಿಂದ ಕೆಲಸ ಮಾಡುವುದು ಆವರಣದ ಆದ್ಯತೆಯಾಗಿದೆ. ಈ ಕಟ್ಟಡವನ್ನು ಸೂರ್ಯನ ಬೆಳಕು ಕಟ್ಟಡದೊಳಗೆ ಛಾವಣಿ ಕಿಟಕಿಗಳ ಮೂಲಕ ಪ್ರವೇಶಿಸಲು ವೈಶಿಷ್ಟ್ಯಗಳೊಂದಿಗೆ ವಿನ್ಯಾಸಗೊಳಿಸಲಾಗಿರುತ್ತದೆ. ಗಾಳಿ ಹಾದುಹೋಗುವ ದ್ವಾರಗಳು ಮತ್ತು ನಡೆಹಾದಿಗಳು ಗಾಳಿಯ ಮುಕ್ತ ಹರಿವನ್ನು ಅನುವು ಮಾಡಿಕೊಡುತ್ತವೆ. ಆದುದರಿಂದ ವಿದ್ಯುತ್ ಬಳಕೆ ಕನಿಷ್ಠ ಮಟ್ಟದಲ್ಲಿರುತ್ತದೆ. ಸಮೃದ್ಧ ಹಸಿರು ಪರಿಸರ, ಪರಿಸರ ಸಮತೋಲನ ಮತ್ತು ಪರಿಸರ ಸಂಪನ್ಮೂಲಗಳ ಸಂರಕ್ಷಣೆಯ ಬಗ್ಗೆ ಹೆಚ್ಚಿನ ಕಾಳಜಿಯನ್ನು ಹೊಂದಿದ್ದು ಈ ಆವರಣ ಮೋಡಿ ಮಾಡುವ ಅನುಭವವನ್ನು ನೀಡುತ್ತದೆ ಮತ್ತು ಆವರಣದಲ್ಲಿ ಆಹ್ಲಾದಕರ ವಾತಾವರಣವನ್ನು ಸೃಷ್ಟಿಸುತ್ತದೆ. ಆವರಣದಲ್ಲಿ ಎಲ್ಲಾ ಸೌಕರ್ಯಗಳಿದ್ದು ಸುಸಜ್ಜಿತವಾದ ಸಿಬ್ಬಂದಿ ವಸತಿಗೃಹ ಮತ್ತು ನಿರ್ದೇಶಕರ ನಿವಾಸದೊಂದಿಗೆ ೨೦ ಕೊಠಡಿಗಳನ್ನು ಹೊಂದಿರುವ ಒಂದು ಅತಿಥಿ ಗೃಹವನ್ನೂ ಸಹ ಒಳಗೊಂಡಿದೆ.
ನ್ಯಾಕ್ ಉದ್ಯಾನ: ಪರಿಸರ-ಸೂಕ್ಷ್ಮ ಅರಿವು ಬೆಳೆಸುವ ದೃಷ್ಟಿಯಿಂದ ಕಳೆದ ಹಲವಾರು ವರ್ಷಗಳಿಂದ ನ್ಯಾಕ್ ಆವರಣದಲ್ಲಿ ಸುಸಂಸ್ಕೃತ ಉದ್ಯಾನ ಪರಿಸರವನ್ನು ಪೋಷಿಸಿ ಬೆಳೆಸಿದೆ. ಉದ್ಯಾನದಲ್ಲಿ ಅಪರೂಪ ಮತ್ತು ಪ್ರಾದೇಶಿಕ ಪ್ರಭೇದಗಳ ೩೦೦ ಕ್ಕಿಂತ ಹೆಚ್ಚಿನ ಜಾತಿಗಳನ್ನು ಗುರುತಿಸಲಾಗಿದೆ. ಇವುಗಳ ವೈಜ್ಞಾನಿಕ ಹೆಸರು ಮತ್ತು ವಿವರಗಳನ್ನು ಶ್ರೀ ರವಿಕುಮಾರ್ ಕೆ, ಡಾ. ಟಿ.ಎಂ ರಾಮಕೃಷ್ಣ ಅವರ ಸಹಾಯದಿಂದ ಎಸ್.ಪಿ.ಎ. ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯದ ಅನುಭವಿ ಜೀವಿವರ್ಗೀಕರಣ ಶಾಸ್ತ್ರಜ್ಞರಾದ ಡಾ. ವೈ.ಎನ್ ಸೀತಾರಾಮ್ ಅವರು ದಾಖಲಿಸಿದ್ದಾರೆ. ಪ್ರೊ. ಹೆಚ್. ಎ. ರಂಗನಾಥ್ (ಮಾಜಿ ನಿರ್ದೇಶಕರು,ನ್ಯಾಕ್) ೨೦೧೨-೧೩ರಲ್ಲಿ ಮತ್ತು ಮುಂದಿನ ಎಲ್ಲಾ ನಿರ್ದೇಶಕರ ನಿರಂತರ ಬೆಂಬಲ ಮತ್ತು ಪ್ರೋತ್ಸಾಹದಿಂದ ಈ ಯೋಜನೆ ಯಶಸ್ವಿಯಾಗಿ ಮುಂದುವರೆಸಲಾಗಿದೆ.
ನ್ಯಾಕ್ ನ ಸಸ್ಯಸಂಪತ್ತು: ನ್ಯಾಕ್ ಆವರಣದಲ್ಲಿ ಲಭ್ಯವಿರುವ ವಿವಿಧ ಹೂವುಗಳು, ಹಣ್ಣುಗಳು, ಗಿಡಮೂಲಿಕೆಗಳು, ಅಲಂಕಾರಿಕ ಸಸ್ಯಗಳು, ಒಳಾಂಗಣ ಮತ್ತು ಹೊರಾಂಗಣ ಸಸ್ಯಗಳ ಗುರುತಿನ ಮತ್ತು ಅವುಗಳನ್ನು ಸೂಕ್ತವಾಗಿ ದಾಖಲಿಸಲಾಗಿದೆ. ಸಸ್ಯಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ ಮತ್ತು ಸಸ್ಯವನ್ನು ಅದರ ಸಸ್ಯಶಾಸ್ತ್ರೀಯ ಹೆಸರು, ಕುಟುಂಬದ ಹೆಸರು ಮತ್ತು ಮೂರು ಭಾಷೆಗಳಲ್ಲಿ (ಕನ್ನಡ, ಇಂಗ್ಲಿಷ್ ಮತ್ತು ಹಿಂದಿ) ನೀಡಲಾಗಿದೆ. ಸಾಮಾನ್ಯ ಹೆಸರಿನ ಜೊತೆಗೆ ಸಸ್ಯದ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳನ್ನೂ ನೀಡಲಾಗಿದೆ. ಇದು ನ್ಯಾಕ್ ಕೈಗೊಂಡ ವಿಶಿಷ್ಟ ಉಪಕ್ರಮವಾಗಿದೆ. ಇದು ಪ್ರವಾಸಿಗರನ್ನು ಮತ್ತು ಸಸ್ಯ ಪ್ರೇಮಿಗಳನ್ನು ಆಕರ್ಷಿಸುತ್ತದೆ ಮತ್ತು ಅವರ ಗಮನವನ್ನು ಸೆಳೆಯುತ್ತಿದೆ.
ನ್ಯಾಕ್ ನಿರ್ದೇಶಕರ ಮುನ್ನುಡಿಯಿಂದ
ಸ್ವೀಕೃತಿ ಮತ್ತು ಮುನ್ನುಡಿ
ನ್ಯಾಕ್ ಕಛೇರಿ ನವದೆಹಲಿ

<iಯು.ಜಿ.ಸಿ ಅಧ್ಯಕ್ಷರಾದ ಪ್ರೊ. ಡಿ. ಪಿ. ಸಿಂಗ್ ರವರು ಮೇ 14, 2018 ರಂದು ದೆಹಲಿ ದೀನ್ ದಯಾಳ್ ಉಪಾಧ್ಯಾಯ್ ಮಾರ್ಗದಲ್ಲಿ ಅನುವರ್ತ್ ಭವನದಲ್ಲಿ ನವದೆಹಲಿಯ ನ್ಯಾಕ್ ಕಛೇರಿಯನ್ನು ಉದ್ಘಾಟಿಸಿದರು.